ಅವಳನ್ನು ಕಾಡಿಬೇಡಿ ಪ್ರೀತಿ ಮಾಡಲು ಒಪ್ಪಿಸಿದ್ದೆ , ಅವಳೋ ನನಗಿಂತ ಆರೇಳು ತಿಂಗಳು ದೊಡ್ಡವಳು. ಜಗಳವಾಡುವುದರೊಂದಿಗೆ ನಮ್ಮಿಬ್ಬರ ದಿನಚರಿ ಶುರುವಾಗುತ್ತಿತ್ತು. ಆ ಜಗಳ ಅಷ್ಟು ಸುಲಭವಾಗಿ ಮುಗಿಯುತ್ತಲೇ ಇರಲಿಲ್ಲ. ಅವಳೆಲ್ಲೋ ನಾನೆಲ್ಲೋ ಮೊಬೈಲ್ನಲ್ಲಿ ಮಾತ್ರ ಕಿತ್ತಾಡುತ್ತಿದ್ದವು. ಹೀಗೆ ಎರಡು ಮಾಸಗಳು ಕಳೆಯಿತು, ಅವಳು ನನ್ನನು ಭೇಟಿಯಾಗಲು ಚಿಕ್ಕದಾದ ಉಡುಗೊರೆ ಜೊತೆಗೊಂದು ಪತ್ರವನ್ನು ಹಿಡಿದು ಖಾಸಗಿ ಬಸ್ ನಿಲ್ದಾಣದಲ್ಲಿ ಕಾದು ಕುಳಿತಿದ್ದಳು. ನಾನೂ ಆಗ ತಾನೇ ಒಂದು ಪ್ರವಾಸಕ್ಕೆ ಹೋಗಿದ್ದೆ ,ಅವಳಿಗಾಗಿ ಒಂದೆರಡು ಉಡುಗೊರೆಗಳನ್ನು ತಂದಿದ್ದೆ...ಅವನ್ನಿಡಿದು ಸೀದಾ ಬಸ್ ನಿಲ್ದಾಣಕ್ಕೆ ನಡೆದೆ....ಕಣ್ಣೆರಡೂ ಮಿಲಾಯಿಸಿದವು. ಅವಳು ಯಾರಾದರೂ ನೋಡಿದರೆಂಬ ಭಯದಿ ಚೂಡಿದಾರದ ವ್ಹೇಲ್ ನ್ನು ತಲೆಮೇಲೆ ಹಾಕಿಕೊಂಡಳು. ನನಗೇನು ತೋಚದೆ ಸೀದಾ ಅವಳ ಪಕ್ಕದಲ್ಲಿ ಖಾಲಿಯಿದ್ದ ಸೀಟ್ ಗೆ ದೌಡಾಯಿಸಿ "ಹಾಯ್....ಎಷ್ಟೊತ್ತಾಯ್ತು ಬಂದು " ಎಂದು ವಿಚಾರಿಸಿ ಮಾತುಕತೆಗೆ ಮುಂದಾದೆ. ಅವಳು ಭಯದಿಂದಲೇ ತಾನು ತಂದಿದ್ದ ಉಡುಗೊರೆಯನ್ನು ನನ್ನ ಕೈಲಿಟ್ಟು ...ನಿನ್ನ ಭೇಟಿಯಾಗಿದ್ದು ತುಂಬಾ ಖುಷಿ ಆಯ್ತು ಎಂದು ಬಸ್ ನಲ್ಲಿ ಹೋಗಿ ಕುಳಿತಳು. ಮತ್ತೆ ನಾನೂ ತಂದಿದ್ದ ಉಡುಗೊರೆಯನ್ನು ಕೊಡಲು ಬಸ್ ನಲ್ಲಿ ಹೋಗಿ ಕೊಟ್ಟೆ. ಅಲ್ಲೊಂದಿಷ್ಟು ಮಾತಾಡಿ ಟಾಟಾ ಮಾಡಿ ಬಸ್ ಇಳಿದೆ. ಅದೇ ಕೊನೆ ಅವಳನ್ನು ನೋಡಿ ಮಾತಾಡಿದ್ದು, ಅಲ್ಲಿಂದ ಅವಳು ಕೊಟ...