💕💓ಭಾವ ಪರವಶಳಾಗಲು💓💕
ಭಾವ ಪರವಶಳಾಗಲು
ಗೆಳತಿ ನಿನ್ನ ಮಡಿಲೆ ಸಾಕು
ಮಗುವಂತೆ ಮಲಗಲು
ಮಧುರ ಮಾತಿನ ಜೋಗುಳ ಬೇಕು
ನನ್ನನು ನಾ ಮರೆಯಲು
ಗೆಳೆಯ ನಿನ್ನ ಒಂದು ಸ್ಪರ್ಶಬೇಕು
ಭಾವ ಪರವಶಳಾಗಲು
ನಿನ್ನ ಕಿರು ಧ್ವನಿಯೊಂದೆ ಸಾಕು
ನಿನ್ನೊಡನೆ ಬೆರೆಯಲು
ಮನಬಿಚ್ಚಿ ನಕ್ಕುಬಿಡು ಸಖಿ
ಆ ನಗುವಲೆ ನೂರೊರುಷ ಬದುಕುವೆ
ಆಭರಣವ ಬಯಸುವೆಯಾದರೆ
ನಿನ್ಹಣೆಗೆ ಸಿಂಧೂರ ಹಚ್ಚುವೆ
ನೀನಿದ್ದರೆ ನನಗೇನು ಬೇಡ ಸಖ
ಜೊತೆಗಿದ್ದರಷ್ಟೇ ಸಾಕು ಮುನ್ನುಗ್ಗುವೆ
ಆಭರಣದ ಆಸೆ ತೊರೆದಿರುವೆ
ನನಗೆ ನೀನೆ ವಜ್ರದ ಕಿರೀಟವಾಗಿರುವೆ.
ಸರ್ಪ...✍🏻
Super :)
ReplyDelete