😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍
ಮಗ್ಲೂರಾ ಜಾತ್ರ್ಯಾಗ
ಗೊಂಬೆ ತಂದೀನಿ ಬಾರಾ
ಮೊಮ್ಮಗಳಾ ನಿನಗೊಂದ
ಗೊಂಬೆ ತಂದೀನಿ ಬಾರಾ
ಮಗ್ಲೂರಾ ಜಾತ್ರ್ಯಾಗ
ಸುತ್ತಾಡಿ ಹರ್ದಾಡಿ
ನಿಂಗೊಪ್ಪೊಂತ ಗೊಂಬೆ ತಂದೀನಿ ಬಾರಾ ||ಗೊಂಬೆ ತಂದೀನಿ....||
ಬೆಳದೀಸೊರ್ಷಾತು
ಏನು ತರ್ಲಿಲ್ಲಂತ ಬೈಬ್ಯಾಡ
ಕೂಸೆ , ಮುಪ್ಪೈತೆಲ್ಲಾ ಮರೆಸ್ತಾತಂತಾರಂದ್ರೂ ಗೊಂಬೆ ತಂದೀನಿ ಬಾರಾ
||ಗೊಂಬೆ ತಂದೀನಿ...||
ಹಸುಗೂಸು ಇದ್ದಾಗ್ಲೆ
ನನ್ ಮಡ್ಲೀಗೆ ನಿನ್ನ್ಹಾಕಿದ್ರು ಇಬ್ರೂ
ಇಂಗ್ಲೀಷ್ ರಾಣಿಗಿಂತೇನ್ ಕಮ್ಮಿಲ್ಲ ನೀ ಗೊಂಬೆ ತಂದೀನಿ ಬಾರಾ
||ಗೊಂಬೆ ತಂದೀನಿ...||
ಒಬ್ಬಂಟಿ ಆಗಿದ್ದ ನಂಗೆ
ಪ್ರೀತಿ ತೋರ್ಸಾಕ ಬಂದೆವ್ವಾ ನೀ
ಆ ದ್ಯಾವ್ತೇನೆ ಬಂದು ಕಣ್ಮುಂದೆ ನಿಂತಂಗಾಗ್ತೈತಿ , ಗೊಂಬೆ ತಂದೀನಿ ಬಾರಾ
||ಗೊಂಬೆ ತಂದೀನಿ...||
ಸರ್ಪ...✍🏻

Comments
Post a Comment