ಮೌನವು ಆವರಿಸಿದೆhttps://ಸರ್ಪಭೂಷಣ.ಬ್ಲಾಗರ್.ಕಾಂ/ಸರ್ಪನ್ ಬರಹ
ಮೌನವು ಆವರಿಸಿದೆ
ನೀನ್ನಾಗಮನವಾಗಲೇಬೇಕೆಂದು
ಕಪ್ಪುಬಟ್ಟೆಯ ಧರಿಸಿ ಮೌನದಿಂದ
ಪ್ರತಿಭಟನೆಗೈದಿರುವೆ ಇನಿಯ
ಅಂದು ನೀ ಕಟ್ಟಿದ ಗೆಜ್ಜೆಯು
ನಿನ್ನ ಜೊತೆ ಹೆಜ್ಜೆ ಹಾಕಲು
ಒಂದೇ ಸಮನೆ ತವಕಿಸುತ್ತಿದೆ
ನಿನ್ನ ಪೂಜೆಗೆಂದು ತಂದಿರುವ
ಪದ್ಮಪುಷ್ಪಗಳು ಕಳೆಗುಂದಿವೆ
ಮನದ ಭಾವನೆಗಳೆಲ್ಲಾ
ಜೀವ ಕಳೆದುಕೊಂಡಿದು
ಮೌನವು ಆವರಿಸಿದೆ
ಕೇಳಲೆಂದೆ ಕಾದಿರುವೆ ನಿನ್ನ ದನಿಯ
ತಡಮಾಡದೆ ಬಂದುಬಿಡು ಗೆಳಯ.
ಸರ್ಪ...✍🏻

Comments
Post a Comment