💕ನಾನು ನಿನಾಗಿ...ನೀನು ನಾನಾಗಿದ್ದೆ💕
ನಾನು ನೀನಾಗಿ
ನಲ್ಲ ಮರೆತಿರುವೆಯೇನು
ಕಳೆದಷ್ಟೂ ದಿನಗಳನು
ನನಗಂತೂ ನಿನ್ನದೇ ಗುಂಗು
ಮರೆಲು ಎಂದಿಗೂ ಆಗದು
ಇಬ್ಬರೂ ಸೇರಿ ಮಾಡಿದ
ಚೇಷ್ಟೆ ಕುಚೇಷ್ಟೆಗಳನು
ಗೊತ್ತಿಲ್ಲದ್ದೇನಿದೆ ಹೇಳು
ಮನಸನು ನಿನಗರ್ಪಿಸಿ
ನೀ ನುಡಿಸಿದ ನಾದಕೆ
ಮೈಮರೆತು ನಿಂತಿದ್ದೆನಲ್ಲ
ನಂದನ ವನದಲಿ ನಲಿದಾಡಿ
ಪ್ರೀತಿರಥದಲಿ ಸವಾರಿ ಮಾಡಿ
ತಿಳಿದೂ ತಿಳಿಯದೆ ಬೆರೆತು
ನಾನು ನೀನಾಗಿ ನೀನು ನಾನಾಗಿದ್ದೆ
ನಲ್ಲ ಮರೆತಿರುವೆಯೇನು
ಕಳೆದಷ್ಟೂ ದಿನಗಳನು.
ಸರ್ಪ...✍🏻

Comments
Post a Comment