ಕೊನೆಯ ಅಸ್ತ್ರ
ಕೊನೆಯ ಅಸ್ತ್ರ
ನನ್ನಲ್ಲಿ
ಜ್ವಾಲಾಮುಖಿಯಂತೆ
ಉಕ್ಕಿ ಬರುವ
ಆಸೆಗಳ ತಂಪಾಗಿಸಲು
ನಿನ್ನ ಸಂಧಿಸುವಿಕೆ ಒಂದೇ
ಕೊನೆಯ ಅಸ್ತ್ರ.
ಸರ್ಪ...✍🏻
ಸಖೀ ನೀನೆಷ್ಟೇ ದೂರವಿದ್ದರೂ ನಿನ್ನೊಂದಿಗಿರುವ ನನ್ನ ಬಾಂಧವ್ಯ ಒಂಚೂರು ಕಡಿಮೆಯಗುವುದಿಲ್ಲ. ನೀನೆಷ್ಟೇ ದೂರಿದರೂ ಕೊನೆಗೆ ನಾನೇ ನಿನಗೆ ಎಲ್ಲಾ ಎಂಬುದನ್ನು ಈಗಲೇ ತಿಳಿದುಬಿಡು. ಜಗವೇನೆ ಅಂದರೂ ನನಗದು ಗೌಣ ನೀನೊಂದು ನನ್ನ ಜೊತೆಗಿದ್ದರೆ ಇಡೀ ಜಗವನೇ ಗೆಲ್ಲುವೆ. ನಮ್ಮಿಬ್ಬರ ಪ್ರೀತಿ ಜಗಕೆ ಮಾದರಿಯಾಗಲಿ ಬಿಡು. ನಿನ್ನಲಿ ಉಕ್ಕಿಬರುವ ಅಷ್ಟೂ ಆಸೆಗಳಿಗೆ ಕೊನೆ ನಾನೇ ಆಗಿರುವೆ ,ಹಾಗೆಯೇ ನನ್ನಲಿ ಉಕ್ಕಿಬರುವ ಅಷ್ಟೂ ಆಸೆಗಳಿಗೆ ನಿನ್ನ ಸೇರುವುದೊಂದೇ ಕೊನೆಯ ಅಸ್ತ್ರ. ನಿನ್ನ ಮನದಾಳದಲಿ ಅಷ್ಟೆಲ್ಲಾ ಆಸೆಯಿಟ್ಟುಕೊಂಡು ಮೇಲ್ನೋಟಕ್ಕೆ ಏನೂ ಇಲ್ಲ ಎಂದು ತೋರಿಸಿಕೊಳ್ಳುತ್ತಿರುವೆಯಲ್ಲ...ನೋಡೋಣ ಎಷ್ಟು ದಿನ ಈ ಕಣ್ಣಾಮುಚ್ಚಾಲೆ ಆಟವಾಡುವೆಯೆಂದು. ಕಾಯುವುದು ನನಗೇನು ಹೊಸದಲ್ಲ.
ಸರ್ಪ..✍️
Comments
Post a Comment