💞🌊ಹರಿವ ನೀರಾಗಬೇಕಿತ್ತು🌊💞
ಹರಿವ ನೀರಾಗಬೇಕಿತ್ತು..!
ನಿನ್ನ ತನುವನಾವರಿಸಬಹುದಾಗಿತ್ತು
ಯಾವ ಮುಚ್ಚುಮರೆಯಿಲ್ಲದೇ
ನಿನ್ನ ಸಂಗಡ ಸರಸವಾಡಬಹುದಾಗಿತ್ತು
ಅದಕೆ ನಾನು ಹರಿವ ನೀರಾಗಬೇಕಿತ್ತು
ನಿನ್ನೊಡನೆ ಕಾಲಕಳೆಯಬಹುದಿತ್ತು
ನೀನೆಷ್ಟೇ ನಾಚಿಕೊಂಡರೂ
ನಿನ್ನ ಸರ್ವಾಂಗಗಳಿಗೂ ಮುತ್ತಿಡಬಹುದಿತ್ತು
ಅದಕೆ ನಾನು ಹರಿವ ನೀರಾಗಬೇಕಿತ್ತು
ನಿನ್ನೊಂದಿಗೆ ಬೆರೆತು ಒಂದಾಗಬಹುದಿತ್ತು
ಸರ್ವಕಾಲಕೂ ನೀ ಬಯಸಿ ಬರುವಂತೆ
ಬಿಟ್ಟುಕೊಡದೆ ನಿನ್ನ ಮನ ಸಂತೋಷಪಡಿಸಬಹುದಿತ್ತು
ಅದಕೆ ನಾನು ಹರಿವ ನೀರಾಗಬೇಕಿತ್ತು.
ಸರ್ಪ...✍🏻
Nice
ReplyDeleteTq
Delete