Posts

Showing posts from December, 2022

♥️💕🙏ಮುಕ್ತಿ ಸಿಕ್ಕುಬಿಡಲಿ🙏💕♥️

Image
ಮುಕ್ತಿ ಸಿಕ್ಕುಬಿಡಲಿ ಹೃದಯದ ನೋವಿಗೊಂದಿಷ್ಟು ಉಪ್ಪು ಸಕ್ಕರೆಯಾ ಸುರಿದುಬಿಡು ಗೆಳತಿ ಮೊಹರಂ ದಿನದ ಅಗ್ನಿ ಕುಂಡದಂತೆ ನನ್ನೆದೆಯೂ ಧಗಧಗನೆ ಉರಿದುಬಿಡಲಿ ಈ ನಮ್ಮ ಪ್ರೀತಿ ಅಲ್ಲಿಯೇ ಮಣ್ಣಾಗಲಿ ಕೊನೆಗೊಂದಿಷ್ಟು ಕಪ್ಪು ಬೂದಿಯನು ಪವಿತ್ರವಾದ ಗಂಗೆಯ ಮಡಿಲಿಗೆ ಹಾಕಿಬಿಡು ಸತ್ತ ಪ್ರೀತಿಗೊಂದಿಷ್ಟಾದರೂ ಮುಕ್ತಿ ಸಿಕ್ಕುಬಿಡಲಿ. ಸರ್ಪ...✍🏻

💐💐ಮುರೆಸಂಜಿಹೊತ್ತ💐💐

Image
ಮುರೆಸಂಜಿಹೊತ್ತ ಆವತ್ತ ಮುರೆಸಂಜಿಹೊತ್ತ ಜಿಟಿಜಿಟಿ ಮಳಿ ಹತ್ಕೊಂಡಿತ್ತ ಮೂಡುಗಡೆ ಗಾಳಿ ತಿರುಗಿತ್ತ ಮೈಗೆ ಚಳಿ ಹಿಡ್ದು ನಡುಕ ಹತ್ತಿತ್ತ ಅವ್ಳು ಮಳ್ಯಾಗ ನೆನ್ಕೊಂಡು ಸೀರಿ ಮಣ್ಕಾಲ್ಗಂಟ ಎತ್ಕಂಡು ಬರ್ತಿದ್ಲು ಒಡೋಡ್ಕೊಂಡು ನೋಡ್ತಿದ್ದೆ ನಾ ಮೂಕಾಗಿ ನಿಂತ್ಕಂಡು ಬಂದವ್ಳೆ ನನ್ಹತ್ರ ನಿಂತ್ಕಂಡು ಕಣ್ಣಾಗ ಕಣ್ಣಿಟ್ಟು ನೋಡ್ಕಂಡು ಹೇಳೀದ್ಲು ಸ್ವಲ್ಪಸ್ವಲ್ಪ ಹೆದ್ರುಕೊಂಡು ನನ್ ಮದ್ವೆ ಆಗ್ತೀಯಾ ಅನ್ಕೊಂಡು ನಂಗೂ ಮಳಿಗೆ ಥಂಡಿ ಹತ್ತಿತ್ತ ನೋಡಿದೆ ತಿರ್ತಿರುಗಿ ಅತ್ತಿತ್ತ ಕೊಟ್ಟೇಬಿಟ್ಟೇ ಮುತ್ತ ಒಂದ್ಹತ್ತ ಆಗ್ಲೇ ಮನ್ಸು ಆಕಿಗೆ ಪೂರಾ ಬಿದ್ಬಿಡ್ತ. ಸರ್ಪ. ..✍🏻

ಅಭದ್ರತೆಯ ಹೊಸ ಪಿಂಚಣಿ ಯೋಜನೆ ನಮಗೆ ಬೇಡ

Image
ಸಂವಿಧಾನವು ಒಬ್ಬ ವ್ಯಕ್ತಿ ಬದುಕಲು ಅವಶ್ಯಕತೆ ಇರುವ ಎಲ್ಲಾ ಸೌಲಭ್ಯಗಳು ಬೇಕು ಎಂದು ಹೇಳುತ್ತದೆ.ಆದರೆ ಕೇಂದ್ರ ಸರ್ಕಾರವು 2006ರಿಂದ ಸರ್ಕಾರಿ  ನೇಮವಾಗುವ ಎಲ್ಲಾ ನೌಕರರು ಹೊಸ ಪಿಂಚಣಿ ಯೋಜನೆಗೆ ಒಳಪಡುವ ನಿಯಮಕ್ಕೆ ಒಪ್ಪಿ ಸಹಿಮಾಡಬೇಕಿದೆ. ಈ  ವಿಧಾನ ಒಂದು ರೀತಿ ಸರ್ಕಾರಿ ನೌಕರರನ್ನು ಖಾಸಗೀಕರಣದ ಮೂಲಕ ಆಳುವ ವ್ಯವಸ್ಥೆಯಾಗಿದೆ ಎನ್ನಬಹುದು. 2006ಕ್ಕಿಂತ ಮುಂಚೆ ದೇಶದಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಇದ್ದುದರಿಂದ ಈಗ ನಿವೃತ್ತಿ ಹೊಂದುತ್ತಿರುವ ಸರ್ಕಾರಿ ನೌಕರರ ಭವಿಷ್ಯಕ್ಕೆ ಬುನಾದಿಯಂತೆ ಪಿಂಚಣಿ ಸಹಾಯವಾಗಿದೆ. ಇಂತಹ ಹಳೆ ಪಿಂಚಣಿ ಯೋಜನೆಯಿಂದಾಗಿ ಲಕ್ಷಾನು ಲಕ್ಷ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿವೆ. ಸುಪ್ರೀಂ ನ್ಯಾಯಾಲಯವು ಒಂದು ಪ್ರಕರಣದಲ್ಲಿ  ಪಿಂಚಣಿಯು ಸರ್ಕಾರಿ ನೌಕರನ ಜೀವನಕ್ಕೆ ಆಧಾರವಾಗಿದೆ ಅದನ್ನು ಅವನು ಪಡೆಯುವ ಹಕ್ಕನ್ನು ಹೊಂದಿದ್ದಾನೆ ಎನ್ನುವ ಆದೇಶವೊಂದನ್ನು ನೀಡಿದೆ. ಇಂತಹ ನ್ಯಾಯಯುತ ಸ್ಥಾನದಿಂದಲೇಆದೇಶ ಇರುವಾಗ ಈ ಸರ್ಕಾರವು ಯಾಕೆ ಈ ಹೊಸ ಪಿಂಚಣಿ ನಿಯಮವನ್ನು ಕೈಬಿಡುತ್ತಿಲ್ಲವೋ ತಿಳಿಯದಾಗಿದೆ. ಕೇಂದ್ರದಲ್ಲಿಯೂ ಬಿ.ಜೆ.ಪಿ ಸರ್ಕಾರವಿದೆ , ಕರ್ನಾಟಕದಲ್ಲೂ ಬಿ.ಜೆ.ಪಿ ಸರ್ಕಾರವಿದೆ....ಆದರೂ ಕರ್ನಾಟಕ ಸರ್ಕಾರ ರಾಜ್ಯದ ಯಾವುದೇ ಶಾಸನವನ್ನು ಜಾರಿಗೆ ತರಬೇಕಾದರೆ ಬಿ.ಜೆ.ಪಿ ಹೈಕಮಾಂಡ್ ನ ಕೈಗೊಂಬೆಯಂತೆ ತನ್ನ ಅಧಿಕಾರವನ್ನು ಮೊಟಕುಗೊಳಿಸಿಕೊಳ್ಳುತ್ತದೆ. ಹೀಗಿದ್ದರೆ ನಾವು ರಾಷ್ಟ್ರೀಯ ಪಕ್ಷಗಳನ...

🕵️💑👁️ಸಾಕುಮಾಡಿಬಿಡು ಈ ದೃಷ್ಟಿಯುದ್ಧವ👁️💑🕵️

Image
ಚೆನ್ನಿ ಕೆಂಗುಲಾಬಿ ತುಟಿಯರಳಿಸಿ ಹೃದಯ ಕದಿಯುವ  ಹುನ್ನಾರವೇತಕೆ ಚೆಲುವೆ ಕೊಲ್ಲುವಂತಹ ನೋಟದಿಂದ ಯಾರ ಮನ ಗೆಲ್ಲಲೊರಟಿರುವೆ ಸಾಕುಮಾಡಿಬಿಡು ಚೆನ್ನಿ ದೃಷ್ಟಿಯುದ್ಧದ ಆಟವ ನೀ. ಸರ್ಪ...✍🏻

🥰😘ಏನೆಂದು ಬಣ್ಣಿಸಲಿ ಸಖೀ ನಿನ್ನನು😘🥰

Image
ಏನೆಂದು ಬಣ್ಣಿಸಲಿ ಸಖೀ ನಿನ್ನನು ಹೀಗೆ ಕದ್ದು ಕದ್ದು ನೋಡುವ ಖಯಾಲಿ ನಿನಗೇತಕೆ ಗೆಳತಿ ನೀ ಹೀಗೆ ನಗು ನಗುತ್ತಲೇ ಮನವ ಕದ್ದಿರುವೆ ನನ್ನದೀಗಲೇ ಏನೆಂದು ಬಣ್ಣಿಸಲಿ ಸಖೀ ನಿನ್ನನು ಧರೆಗಿಳಿದ ಗಂಧರ್ವ ಕನ್ಯೆ ನೀನೇಯೇನು ಸಾಕಿನ್ನು ಮರೆಮಾಚಿ ನಿಂತಿದ್ದು ಕಣ್ಮುಂದೆ ಬಂದು ಕುಣಿದಾಡಿಬಿಡು ಗರಿಗೆದರಿದ ಮಯೂರದಂತೆ ಇಂಪಾಗಿ ಮಾತೆರಡನು ಆಡಿಬಿಡು ಮಧುರ ಕಂಠದ ಕೋಗಿಲೆಯಂತೆ. ಸರ್ಪ...✍🏻               

💕💑ಕರೆದುಬಿಡು ಬಳಿಗೆ.....ನಿನ್ನ ಮೌನವ ತೊರೆದು💑💕

Image
💕ಕರೆದುಬಿಡು ಬಳಿಗೆ💕 ಈಗೀಗ ನಮ್ಮಿಬ್ಬರ ನಡುವೆ ಮಾತುಗಳಿಗಿಂತ ಮೌನವೇ ಹೆಚ್ಚೆಚ್ಚು ಮಾತಾಡುತ್ತಿದೆ ವಿರಹದ ನೋವುಗಳೆಲ್ಲಾ ಕಣ್ಣಂಚಿನಲಿ ಜಿನುಗುತ್ತಿದ್ದರೆ...😥😥 ಮನದ ಭಾವನೆಗಳೆಲ್ಲಾ ಎದೆಯ ಜ್ವಾಲಾಮುಖಿಗೆ ಸಿಕ್ಕಿವೆ...🔥🔥 ಜೊತೆಗಿದ್ದ ನೆನಪುಗಳೆಲ್ಲಾ ಜಪವಾಗಿ ಜಪಿಸಲ್ಪಡುತ್ತಿವೆ...💑💑 ಈ ನಿನ್ನ ಮೌನವ ತೊರೆದು  ಪ್ರೀತಿಯಿಂದಲಿ ಕರೆದುಬಿಡು ಬಳಿಗೆ😍😍 ಆ ಹುಣ್ಣಿಮೆ ಚಂದ್ರನ ತಂದು🌝🌛🌜 🦜🦜ಗಿಳಿಮೂಗಿನ  ಮೂಗುತಿಗೆ ಹೊಳೆವ ಮುತ್ತನ್ನಾಗಿಟ್ಟುಬಿಡುವೆ.🌠🌠 🐍🐍ಸರ್ಪ...✍🏻

♥️💕ಬಿಡಲಾರೆನು ಚಿನ್ನ ...ನೀನೇಕೆ ತಬ್ಬಿದೆ ನನ್ನ💕♥️

Image
ಬಿಡಲಾರೆನು ನೀ ಹೀಗೆ ನನ್ನನು ತಬ್ಬಿದಾ ಮರುಕ್ಷಣದಿಂದಲೇ ಜಗವನೇ ಮರೆತೆನು ಹೃದಯಗಳೆರಡು ಈಗ ಒಂದೇ ಸಾಲಲ್ಲಿ ಕೂತಿವೆ ಒಂದನ್ನೊಂದು ಒಲಿಸಿಕೊಳ್ಳಲು ಅರೆಘಳಿಗೆ ಮರೆತೆನಾದರೂ ನನ್ನ ಬಿಡಲಾರೆನು ಕೇಳೆನ್ನ ಚಿನ್ನ. ಸರ್ಪ...✍🏻

💕ಕೃಷ್ಣನಿಲ್ಲದ ಈ ರಾಧೆಗೆ......ಹೇಳು ಕೃಷ್ಣಾ💕

Image
ಕೃಷ್ಣನಿಲ್ಲದ ಈ ರಾಧೆಗೆ... ನಿನ್ನ ಹೃದಯ ಸಾಮ್ರಾಜ್ಯದಲ್ಲಿ ಸಾಮ್ರಾಜ್ಞೆಯಾಗಬೇಕಿಂದಿದ್ದೆ ಕೃಷ್ಣಾ ಕೊನೆಪಕ್ಷ ನಿನ್ನ ಪ್ರೇಮದರಮನೆಯ ದಾಸಿಯನ್ನಾದರಾಗಿಸಿಬಿಡು ಕೃಷ್ಣಾ.. ಕೃಷ್ಣನಿಲ್ಲದ ಈ ರಾಧೆಗೆ ಮನ್ನಣೆಯಿಲ್ಲವೋ ಒಲವ ಕಡಲಲಿ ಒಬ್ಬಂಟಿಯಾಗೀಜುವುದೆಂದರೆ ಒಂಟೆತ್ತು ಭಾರವ ಹೊತ್ತು ಸಾಗಿದಂತೆ ಅಂಜಿಕೆಯೆನಗೆ ನೀನಿರದೆ ರಾಧೆ ಬದುಕಲಾರಳು ಕೇಳು ಕೃಷ್ಣಾ ವಿರಹದ ಈ ಬಾಳೊಂದು ದೊಡ್ಡ ಗೋಳು ಕೃಷ್ಣಾ. ಸರ್ಪ...✍🏻

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

Image
ಮಗ್ಲೂರಾ ಜಾತ್ರ್ಯಾಗ ಗೊಂಬೆ ತಂದೀನಿ ಬಾರಾ ಮೊಮ್ಮಗಳಾ ನಿನಗೊಂದ ಗೊಂಬೆ ತಂದೀನಿ ಬಾರಾ ಮಗ್ಲೂರಾ ಜಾತ್ರ್ಯಾಗ ಸುತ್ತಾಡಿ ಹರ್ದಾಡಿ                ನಿಂಗೊಪ್ಪೊಂತ ಗೊಂಬೆ ತಂದೀನಿ ಬಾರಾ                ||ಗೊಂಬೆ ತಂದೀನಿ....|| ಬೆಳದೀಸೊರ್ಷಾತು ಏನು ತರ್ಲಿಲ್ಲಂತ ಬೈಬ್ಯಾಡ ಕೂಸೆ , ಮುಪ್ಪೈತೆಲ್ಲಾ ಮರೆಸ್ತಾತಂತಾರಂದ್ರೂ ಗೊಂಬೆ ತಂದೀನಿ ಬಾರಾ       ||ಗೊಂಬೆ ತಂದೀನಿ...|| ಹಸುಗೂಸು ಇದ್ದಾಗ್ಲೆ ನನ್ ಮಡ್ಲೀಗೆ ನಿನ್ನ್ಹಾಕಿದ್ರು ಇಬ್ರೂ ಇಂಗ್ಲೀಷ್ ರಾಣಿಗಿಂತೇನ್ ಕಮ್ಮಿಲ್ಲ ನೀ ಗೊಂಬೆ ತಂದೀನಿ ಬಾರಾ        ||ಗೊಂಬೆ ತಂದೀನಿ...|| ಒಬ್ಬಂಟಿ ಆಗಿದ್ದ ನಂಗೆ ಪ್ರೀತಿ ತೋರ್ಸಾಕ ಬಂದೆವ್ವಾ ನೀ ಆ ದ್ಯಾವ್ತೇನೆ ಬಂದು ಕಣ್ಮುಂದೆ ನಿಂತಂಗಾಗ್ತೈತಿ , ಗೊಂಬೆ ತಂದೀನಿ ಬಾರಾ      ||ಗೊಂಬೆ ತಂದೀನಿ...|| ಸರ್ಪ...✍🏻

🥰😍ಬೇಕಿನ್ನೇನು ಹೇಳು ಸಖಿ😍🥰

Image
ಹಾಳಾಗಲು ಕೆಂಪಾದ ಮದರಂಗಿ ಇಂಪಾದ ಗೆಜ್ಜೆಯ ನಾದ ಬೇಕಿನ್ನೇನು ಹೇಳು ಸಖಿ ಈ ಹೃದಯ ಹಾಳಾಗಲು. ಸರ್ಪ...✍🏻

🥰😍ಕೊಟ್ಟೂರಿನ ಮನಸುಗಳು😍🥰

Image
ಆರಾಧ್ಯದೈವ ಶ್ರೀಗುರು ಕೊಟ್ಟೂರೇಶ್ವರರ ಕೊನೆಯ ಕಾರ್ತೀಕ ಉತ್ಸವದಲ್ಲಿ ದೀಪಗಳಿಗೆ ಎಣ್ಣೆ ಬತ್ತಿ ಹಾಕಿ ತಮ್ಮ ಹರಕೆಯನ್ನು ತೀರಿಸಿದ ಮುಸ್ಲೀಂ ಬಾಂಧವರು....ಕೊಟ್ಟೂರು ಒಂದು ಜಾತ್ಯಾತೀತ ಪ್ರಾಂತ್ಯ ಎಂಬುದಕ್ಕೆ ಉತ್ತಮ ಸಾಕ್ಷಿ ಇದಾಗಿದ್ದು, ಇತಿಹಾಸ ಪೂರ್ವದಿಂದಲೂ ಇದು ಹೀಗೆಯೇ ನಡೆದುಕೊಂಡು ಬರುತ್ತಿದೆ. ಇತ್ತೀಚೆಗೆ ಕೆಲವರು ತಮ್ಮ ಸ್ವಂತಿಕೆಯನ್ನು ಮೆರೆಯಲು ಅಲ್ಲಲ್ಲಿ ಜಾತಿಕಿಡಿ ಹೊತ್ತಿಸಿಕೊಂಡು ಬರುತ್ತಿದ್ದಾರಾದರೂ ಸತ್ಯ ಸತ್ಯವಾಗಿಯೇ ಇರುತ್ತದೆ ಎಂಬುದು ಅವರಿಗೆ ಅರಿವಾಗಿದ್ದರೂ ಮತ್ತೆ ಹೊಲಸು ತಿನ್ನುವ ಕೆಲಸಕ್ಕೆ ಕೈಹಾಕುತ್ತಾರೆಂದರೆ ಅಂತವರಿಗೇನೂ ಹೇಳಲುಬಾರದು. ಶ್ರೀಗುರು ಕೊಟ್ಟೂರೇಶ್ವರರು ತಮ್ಮ ಪವಾಡಗಳಿಂದ ಜಾತಿಯೆಂದೇಳುವ ಪ್ರತಿಯೊಂದೂ ಮಜಲಿಗೂ ತನ್ನ ಸೇವೆಗೆಂದು ಅವಕಾಶ ಕೊಟ್ಟಿದ್ದಾನೆ. ಉದಾಹರಣೆಗೆ ಆಶೀರ್ವಾದ ಕೊಡಲು ಬೇಡಜಂಗಮರಿಗೆ ಅವಕಾಶ ನೀಡಿದ್ದಾನೆ , ಹಿರೇಮಠದ ಜಾತ್ರೆ, ಉತ್ಸವಗಳಲ್ಲಿ ಊರಿನ ಗೌಡರು, ಗಾಣಿಗರು, ವಿಶ್ವಕರ್ಮದವರು ಇನ್ನಿತರರಿಗೆ ಅವಕಾಶ ಕಲ್ಪಿಸಿದ್ದಾರೆ, ಇನ್ನು ರಥೋತ್ಸವದ ಸಂದರ್ಭದಲ್ಲಿ ದಲಿತ ಮಹಿಳೆಯೊಬ್ಬರು ಆರತಿ ಬೆಳಗಿ, ಗಿಣ್ಣದ ನೈವೇದ್ಯ ನೀಡುವ ಅವಕಾಶವನ್ನು ಕಲ್ಪಿಸಿದ್ದಾರೆ. ಶ್ರೀಗುರು ಕೊಟ್ಟೂರೇಶ್ವರರು ತಮ್ಮ ಪವಾಡಗಳಿಂದ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಪ್ರತಿವರ್ಷ ಮೊಹರಂ ಸಂದರ್ಭದಲ್ಲಿ ದೇವರುಗಳಿಗೆ ಕೊಟ್ಟೂರ ಹಿರೇಮಠದ ಮುಂದೆ ಮಂಗಳಾರತಿಯನ್ನು ಬೆಳಗುವುದರ ಮೂಲಕ ಹಿಂದೂ ಮುಸ್ಲಿಂ ಬಾಂಧವ್...