ಅಭದ್ರತೆಯ ಹೊಸ ಪಿಂಚಣಿ ಯೋಜನೆ ನಮಗೆ ಬೇಡ








ಸಂವಿಧಾನವು ಒಬ್ಬ ವ್ಯಕ್ತಿ ಬದುಕಲು ಅವಶ್ಯಕತೆ ಇರುವ ಎಲ್ಲಾ ಸೌಲಭ್ಯಗಳು ಬೇಕು ಎಂದು ಹೇಳುತ್ತದೆ.ಆದರೆ ಕೇಂದ್ರ ಸರ್ಕಾರವು 2006ರಿಂದ ಸರ್ಕಾರಿ  ನೇಮವಾಗುವ ಎಲ್ಲಾ ನೌಕರರು ಹೊಸ ಪಿಂಚಣಿ ಯೋಜನೆಗೆ ಒಳಪಡುವ ನಿಯಮಕ್ಕೆ ಒಪ್ಪಿ ಸಹಿಮಾಡಬೇಕಿದೆ. ಈ  ವಿಧಾನ ಒಂದು ರೀತಿ ಸರ್ಕಾರಿ ನೌಕರರನ್ನು ಖಾಸಗೀಕರಣದ ಮೂಲಕ ಆಳುವ ವ್ಯವಸ್ಥೆಯಾಗಿದೆ ಎನ್ನಬಹುದು. 2006ಕ್ಕಿಂತ ಮುಂಚೆ ದೇಶದಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಇದ್ದುದರಿಂದ ಈಗ ನಿವೃತ್ತಿ ಹೊಂದುತ್ತಿರುವ ಸರ್ಕಾರಿ ನೌಕರರ ಭವಿಷ್ಯಕ್ಕೆ ಬುನಾದಿಯಂತೆ ಪಿಂಚಣಿ ಸಹಾಯವಾಗಿದೆ. ಇಂತಹ ಹಳೆ ಪಿಂಚಣಿ ಯೋಜನೆಯಿಂದಾಗಿ ಲಕ್ಷಾನು ಲಕ್ಷ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿವೆ.


ಸುಪ್ರೀಂ ನ್ಯಾಯಾಲಯವು ಒಂದು ಪ್ರಕರಣದಲ್ಲಿ  ಪಿಂಚಣಿಯು ಸರ್ಕಾರಿ ನೌಕರನ ಜೀವನಕ್ಕೆ ಆಧಾರವಾಗಿದೆ ಅದನ್ನು ಅವನು ಪಡೆಯುವ ಹಕ್ಕನ್ನು ಹೊಂದಿದ್ದಾನೆ ಎನ್ನುವ ಆದೇಶವೊಂದನ್ನು ನೀಡಿದೆ. ಇಂತಹ ನ್ಯಾಯಯುತ ಸ್ಥಾನದಿಂದಲೇಆದೇಶ ಇರುವಾಗ ಈ ಸರ್ಕಾರವು ಯಾಕೆ ಈ ಹೊಸ ಪಿಂಚಣಿ ನಿಯಮವನ್ನು ಕೈಬಿಡುತ್ತಿಲ್ಲವೋ ತಿಳಿಯದಾಗಿದೆ.


ಕೇಂದ್ರದಲ್ಲಿಯೂ ಬಿ.ಜೆ.ಪಿ ಸರ್ಕಾರವಿದೆ , ಕರ್ನಾಟಕದಲ್ಲೂ ಬಿ.ಜೆ.ಪಿ ಸರ್ಕಾರವಿದೆ....ಆದರೂ ಕರ್ನಾಟಕ ಸರ್ಕಾರ ರಾಜ್ಯದ ಯಾವುದೇ ಶಾಸನವನ್ನು ಜಾರಿಗೆ ತರಬೇಕಾದರೆ ಬಿ.ಜೆ.ಪಿ ಹೈಕಮಾಂಡ್ ನ ಕೈಗೊಂಬೆಯಂತೆ ತನ್ನ ಅಧಿಕಾರವನ್ನು ಮೊಟಕುಗೊಳಿಸಿಕೊಳ್ಳುತ್ತದೆ. ಹೀಗಿದ್ದರೆ ನಾವು ರಾಷ್ಟ್ರೀಯ ಪಕ್ಷಗಳನ್ನು ರಾಜ್ಯದಲ್ಲಿ ಆರಿಸಿತರುವುದಾದರೂ ಏತಕ್ಕೆ....ನಾವು ನಮಗೆ ಒಳ್ಳೆಯದಾಗುತ್ತೆ ಎನ್ನುವುದರಿಂದಲೋ, ಹಣದ ಆಮಿಶೆಗೆ ಒಳಗಾಗಿಯೋ ಇವರನ್ನು ಆಯ್ಕೆಮಾಡುತ್ತೇವೆ. ಆಯ್ಕೆಮಾಡಿ ರಾಜಕೀಯದ ನಾಟಕಗಳನ್ನು ನೋಡುತ್ತಾ ಮೂಕ ಪ್ರೇಕ್ಷನಾಗಿ ಕುಳಿತುಬಿಡುತ್ತೇವೆ. 
ನಮ್ಮ ಶಾಸಕರು, ಸಂಸದರು ,ಸಚಿವರು ಇವರೆಲ್ಲರೂ ರಾಜಕಾರಣಿಗಳು ಎಂದೆನಿಸದರೂ ಇವರು ಚುನಾಯಿತರಾದಮೇಲೆ ಸರ್ಕಾರಿ ನೌಕರರು ಎಂದೇ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನಮ್ಮ ಸಮಸ್ಯೆಗಳನ್ನು ಪರಿಹರಿಸಲೆಂದು ಚುನಾಯಿತರಾದ ಇವರಿಗೆ ಲಕ್ಷ ಲಕ್ಷ ಸಂಬಳವಿದೆ, ಆ ಸಂಬಳವನ್ನು  ಸರ್ಕಾರದ ಖಜಾನೆಯಿಂದಲೇ ನೀಡಲಾಗುತ್ತದೆ..ಚುನಾಯಿದರಾದ ಮೇಲೆ ಇವರೂ ಸರ್ಕಾರದ ನೇಮಕಾತಿ ನಿಯಮಗಳಿಗೆ ಒಳಪಡುತ್ತಾರೆ..ಆದರೂ ಇವರು ಹೊಸ ಪಿಂಚಣಿ ಯೋಜನೆಗೆ ಒಳಪಡುತ್ತಿಲಲ, ಮತ್ತೆ ಒಂದು ಬಾರಿ ಸಂಸದ, ಶಾಸಕರಾದಮೇಲೆ.....ಇವರಿಗೂ ಇಂತಿಷ್ಟು ಪಿಂಚಣಿ ಎಂದು ಮಾಡಿಕೊಂಡಿದ್ದಾರೆ ,ಖುಷಿಯಾಗಿದ್ದಾರೆ. ಆದರೆ ಕೆಳಹಂತದ ,ಮಧ್ಯಮವರ್ಗದ ಸರ್ಕಾರಿ ನೌಕರನು ಪಿಂಚಣಿಗಾಗಿ ಅಲೆಯುವಂತಹ ಸ್ಥಿತಿಯನ್ನು ತಂದಿಟ್ಟಿದ್ದಾರೆ.

ಹೊಸ ಪಿಂಚಣಿ ಯೋಜನೆಯಲ್ಲಿ ನಮ್ಮ ಹಣವನ್ನು ನಮಗೆ ನೀಡಲು ಇವರ ಕಾರ್ಪೋರೇಟ್ ನಿಯಮಗಳನ್ನು ರಚಿಸಿಕೊಂಡಿದ್ದಾರೆ. ಬಿ.ಜೆ.ಪಿ. ಸರ್ಕಾರವು ಆಡಳಿತ ನಡೆಸುವುದು ಎಂದು ನಂಬಿದ ಎಲ್ಲರಿಗೂ ಕಾರ್ಪೋರೇಟ್ ಜಗತ್ತಿನ ಬಿಸಿ ಮುಟ್ಟಿಸುತ್ತಿದೆ. ಪ್ರತಿಯೊಂದರಲ್ಲೂ ಖಾಸಗೀಕರಣದ ಮಂತ್ರವನ್ನು ಮೊಳಗಿಸುತ್ತಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಾಯ್ತು ಈಗ ಸರ್ಕಾರಿ ನೌಕರರನ್ನು ಇದಕ್ಕೆ ತಳ್ಳುವ ಯೋಜನೆ ಹೊಸ ಪಿಂಚಣಿ ಯೋದನೆಯಾಗಿದೆ. ಯಾವುದೇ ಭದ್ರತೆ ಇಲ್ಲದ ಸರ್ಕಾರಿ ನೌಕರನ ಜೀವನ ಬೀದಿಪಾಲಾಗುವುದರಲ್ಲಿ ಎರಡು ಮಾತಿಲ್ಲ.

ಕರ್ನಾಟಕದಲ್ಲಿ ಇತ್ತೀಚೆಗೆ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸುವಂತೆ ಹಲವಾರು ಬಾರಿ ಹೋರಾಟದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ...2022ರ ಚಳಿಗಾಲದ ಅಧಿವೇಶನದಲ್ಲಿ  ಇಂತಹ ಬೇಡಿಕೆ ಸರ್ಕಾರದ ಮುಂದಿಲ್ಲ ಎಂಬ ಮೂಗುಮುರಿಯುವ ಉತ್ತರವನ್ನು ನೀಡಲಾಗಿದೆ. ಇಂತಹ ಸರ್ಕಾರದ ಮೇಲೆ ಯಾವ ರೀತೌಯ ನಂಬಿಕೆಯನ್ನು ಇಡಬೇಕು ಎಂಬುದು ತಿಳಿಯದಾಗಿದೆ.  ಇದರ ಜೊತೆಗೆ ರಾಜ್ಯದಲ್ಲಿ 7ನೇ ವೇತನ ಆಯೋಗ ರಚಿಸುವ ಭರವಸೆ ನೀಡಿ ಈಗೀಗ ಜಾರಿಕೊಳ್ಳುವ ಸಬೂಬಿನೊಂದಿಗೆ ಸರ್ಕಾರವನ್ನು ನೂಕುತ್ತಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸುಕೊಳ್ಳುವ ಅವರದೇ ನಡೆಯಾಗಿದೆ.

ಸರ್ಕಾರಿ ನೌಕರನೆಂದರೆ ಕೇವಲ ಎಂದು ತಿಳಿದುಕೊಳ್ಳಲಾಗಿದೆ, ಇದಕ್ಕೆ ನೌಕರರು ಯಾರೂ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಯಾರು ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತೋರೋ ಅವರನಿಂದ ಸರ್ಕಾರ ರಚನೆ ಆಗಬೇಕು. ಆ ಸರ್ಕಾರವನ್ನು ರಚಿಸುವ ಅಧಿಕಾರ ಮತದಾರರಾದ ನಮ್ಭ ಕೈಯಲ್ಲಿದೆ. ಈ ಬಾರಿ ಬಿ.ಜೆಪಿಯನ್ನು ಆಡಳಿತಕ್ಕೆ ತಂದಿದ್ದಕ್ಕೆ ಉಳಿದವರು ನಮ್ಮನ್ನು ನೋಡಿ ನಗುವಂತಾಗಿದೆ. ಇಝತಹ ಪರಿಸ್ಥಿತಿ ಮುಂದೆಂದೂ ಬಾರದಂತೆ ಎಚ್ಚರ ವಹಿಸಿ ಮುಂದಿನ ವರ್ಷದಲ್ಲಿ ಉತ್ತಮ ಸರ್ಕಾರವನ್ನು ತರುವ ನಿಟ್ಟಿನಲ್ಲಿ ನಿರ್ಧಾವನ್ನು ಮಾಡೋಣ. 

ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಸರ್ಕಾರಕ್ಕೆ ,ಪಕ್ಷಕ್ಕೆ ನಮ್ಮ ಮತ . ನಮ್ಮ ಪಿಂಚಣಿ  ನಮ್ಮ ಹಕ್ಕು. ಈಗಿನ ಅನಿರ್ಧಿಷ್ಟ ಹೋರಾಟ ಹೀಗೆಯೆ ಮುಂದುವರೆಯಲಿ..ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎಲ್ಲರೂ ಬೆಂಬಲಿಸೋಣ...ನಮ್ಮ ಹಕ್ಕು ಪಡೆಯುವಲ್ಲಿ ನಾವೇ ಮುಂದಾಗಬೇಕು..ಇಲ್ಲವಾದರೆ ಅಧಿಕಾರ ಚಲಾಯಿಸಿ ನಮ್ಮನ್ನು ತಣ್ಣಗಾಗಿಸಿಬಿಡುತ್ತಾರೆ.  

ಹೊಸ ಪಿಂಚಣಿ ಯೋಜನೆ ತೊಲಗಲಿ, ಹಳೆ ಪಿಂಚಣಿ ಯೋಜಗೆ ಜಾರಿಯಾಗಲಿ. ಸರ್ಕಾರಿ ನೌಕರರ ಹೋರಾಟಕ್ಕೆ ಜಯವಾಗಲಿ.


Comments

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰