💕ಕೃಷ್ಣನಿಲ್ಲದ ಈ ರಾಧೆಗೆ......ಹೇಳು ಕೃಷ್ಣಾ💕



ಕೃಷ್ಣನಿಲ್ಲದ ಈ ರಾಧೆಗೆ...

ನಿನ್ನ ಹೃದಯ ಸಾಮ್ರಾಜ್ಯದಲ್ಲಿ
ಸಾಮ್ರಾಜ್ಞೆಯಾಗಬೇಕಿಂದಿದ್ದೆ ಕೃಷ್ಣಾ

ಕೊನೆಪಕ್ಷ ನಿನ್ನ ಪ್ರೇಮದರಮನೆಯ
ದಾಸಿಯನ್ನಾದರಾಗಿಸಿಬಿಡು ಕೃಷ್ಣಾ..

ಕೃಷ್ಣನಿಲ್ಲದ ಈ ರಾಧೆಗೆ ಮನ್ನಣೆಯಿಲ್ಲವೋ
ಒಲವ ಕಡಲಲಿ ಒಬ್ಬಂಟಿಯಾಗೀಜುವುದೆಂದರೆ

ಒಂಟೆತ್ತು ಭಾರವ ಹೊತ್ತು ಸಾಗಿದಂತೆ ಅಂಜಿಕೆಯೆನಗೆ
ನೀನಿರದೆ ರಾಧೆ ಬದುಕಲಾರಳು ಕೇಳು ಕೃಷ್ಣಾ
ವಿರಹದ ಈ ಬಾಳೊಂದು ದೊಡ್ಡ ಗೋಳು ಕೃಷ್ಣಾ.

ಸರ್ಪ...✍🏻

Comments

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰