💐💐ಮುರೆಸಂಜಿಹೊತ್ತ💐💐


ಮುರೆಸಂಜಿಹೊತ್ತ

ಆವತ್ತ ಮುರೆಸಂಜಿಹೊತ್ತ
ಜಿಟಿಜಿಟಿ ಮಳಿ ಹತ್ಕೊಂಡಿತ್ತ
ಮೂಡುಗಡೆ ಗಾಳಿ ತಿರುಗಿತ್ತ
ಮೈಗೆ ಚಳಿ ಹಿಡ್ದು ನಡುಕ ಹತ್ತಿತ್ತ

ಅವ್ಳು ಮಳ್ಯಾಗ ನೆನ್ಕೊಂಡು
ಸೀರಿ ಮಣ್ಕಾಲ್ಗಂಟ ಎತ್ಕಂಡು
ಬರ್ತಿದ್ಲು ಒಡೋಡ್ಕೊಂಡು
ನೋಡ್ತಿದ್ದೆ ನಾ ಮೂಕಾಗಿ ನಿಂತ್ಕಂಡು

ಬಂದವ್ಳೆ ನನ್ಹತ್ರ ನಿಂತ್ಕಂಡು
ಕಣ್ಣಾಗ ಕಣ್ಣಿಟ್ಟು ನೋಡ್ಕಂಡು
ಹೇಳೀದ್ಲು ಸ್ವಲ್ಪಸ್ವಲ್ಪ ಹೆದ್ರುಕೊಂಡು
ನನ್ ಮದ್ವೆ ಆಗ್ತೀಯಾ ಅನ್ಕೊಂಡು

ನಂಗೂ ಮಳಿಗೆ ಥಂಡಿ ಹತ್ತಿತ್ತ
ನೋಡಿದೆ ತಿರ್ತಿರುಗಿ ಅತ್ತಿತ್ತ
ಕೊಟ್ಟೇಬಿಟ್ಟೇ ಮುತ್ತ ಒಂದ್ಹತ್ತ
ಆಗ್ಲೇ ಮನ್ಸು ಆಕಿಗೆ ಪೂರಾ ಬಿದ್ಬಿಡ್ತ.


ಸರ್ಪ...✍🏻


Comments

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰