🥰😘ಏನೆಂದು ಬಣ್ಣಿಸಲಿ ಸಖೀ ನಿನ್ನನು😘🥰
ಏನೆಂದು ಬಣ್ಣಿಸಲಿ ಸಖೀ ನಿನ್ನನು
ಹೀಗೆ ಕದ್ದು ಕದ್ದು ನೋಡುವ
ಖಯಾಲಿ ನಿನಗೇತಕೆ ಗೆಳತಿ
ನೀ ಹೀಗೆ ನಗು ನಗುತ್ತಲೇ
ಮನವ ಕದ್ದಿರುವೆ ನನ್ನದೀಗಲೇ
ಏನೆಂದು ಬಣ್ಣಿಸಲಿ ಸಖೀ ನಿನ್ನನು
ಧರೆಗಿಳಿದ ಗಂಧರ್ವ ಕನ್ಯೆ ನೀನೇಯೇನು
ಸಾಕಿನ್ನು ಮರೆಮಾಚಿ ನಿಂತಿದ್ದು
ಕಣ್ಮುಂದೆ ಬಂದು ಕುಣಿದಾಡಿಬಿಡು
ಗರಿಗೆದರಿದ ಮಯೂರದಂತೆ
ಇಂಪಾಗಿ ಮಾತೆರಡನು ಆಡಿಬಿಡು
ಮಧುರ ಕಂಠದ ಕೋಗಿಲೆಯಂತೆ.
ಸರ್ಪ...✍🏻

Comments
Post a Comment