👉💴💰ಅತಿಯಾಸೆ ಗತಿಗೆಡಿಸಿತು, ಹೆಂಡತಿಯ ಹಣದಾಸೆ ಗಂಡನ ಬಲಿತೆಗೆದುಕೊಂಡಿತು🙁🙁
ಅತಿಯಾಸೆ ಗತಿಗೆಡಿಸಿತು ಎನ್ನುವ ಗಾದೆ ನಮ್ಮ ಹಿರಿಯರ ಕಾಲದಿಂದಲೂ ಬಂದಂತಹದ್ದು. ಇದು ಪ್ರಸ್ತುತ ದಿನಕ್ಕೆ ನೂರಕ್ಕೆ ನೂರರಷ್ಟು ಸತ್ಯವಾದ ಉದಾಹರಣೆಯೊಂದನ್ನು ನಮ್ಮ ಕಣ್ಮುಂದೆ ಇಟ್ಟಿದೆ. ಅದೇನಪ್ಪ ಅಂತಹ ಉದಾಹರಣೆಯೆಂದರೆ ಇತ್ತೀಚೆಗೆ ಬಂದ ಒಂದು ಸುದ್ಧಿ " ಮಂಡ್ಯ ಜಿಲ್ಲೆಯಲ್ಲಿ ಹೆಂಡತಿಯ ಹಣದ ಹುಚ್ಚು ತನ್ನ ಗಂಡನನ್ನೇ ಬಲಿತೆಗೆದುಕೊಂಡಿರುವ ಘಟನೆ" ...ಈ ರೀತಿಯ ಹಲವಾರು ಘಟನೆಗಳು ನಡೆದಿವೆಯಾದರೂ ಕಣ್ಣಿಗೆ ಕಂಡಿಲ್ಲ. ಒಬ್ಬ ಹೆಣ್ಣು ತನ್ನ ಸಂಸಾರವನ್ನು ಒಳ್ಳೆಯ ರೀತಿಯಲ್ಲಿ ಸಾಗಿಸುವಲ್ಲಿ ಮಾದರಿಯಾಗಿ ನಿಲ್ಲುವ ಈ ಕಾಲದಲ್ಲಿ ತನ್ನ ಪತಿಗೆ ದಿನಾಲು ಹಣದ ಬೇಡಿಕೆಯಿಟ್ಟು , ಆತನ ಮನಸ್ಥಿತಿಯನ್ನು ಅರಿಯದೇ ವರ್ತಿಸಿದ್ದರಿಂದ ಇಂದು ಆಕೆಯ ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರಿಂದ ಆಕೆಗಾದ ಲಾಭವಾದರೂ ಏನು ತಿಳಿಯದು.
ಹೀಗೆ ನಾವು ಅತಿಯಾದ ಆಸೆಗಳ ಹಿಂದೆ ಓಡಿದಾಗ ನಮ್ಮ ಜೀವನದ ಸುಖ ಸಮಯವನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ. ಯಾವುದೇ ವಸ್ತುವನ್ನು ಆಸೆ ಪಡಬೇಕು ನಿಜ ,ಆದರೆ ಅತಿಯಾಸೆ ಪಟ್ಟರೆ ಇಂತಹ ಘಟನೆಗಳು ಜರುಗುವವು. ಹಾಗೆ ಏನನ್ನಾದರೂ ಪಡೆಯಬೇಕೆಂದರೆ ಅದಕ್ಕೊಂದಿಷ್ಟು ರೀತಿ ನೀತಿ, ಇತಿ ಮಿತಿ ಎನ್ನುವ ಪದಗಳನ್ನು ಅಳವಡಿಸಿಕೊಂಡಲ್ಲಿ ನಮ್ಮ ಸಂಸಾರ, ಜೀವನ ಸಂತಸದಿಂದ ಕೂಡಿರುತ್ತದೆ ಮತ್ತು ಆತ್ಮಹತ್ಯೆ, ಕೊಲೆ, ಜಗಳ, ಮನಸ್ತಾಪ ಇಂತಹ ಕೆಟ್ಟ ಘಟನೆಗಳೂ ಸಹ ಉದ್ಭವಿಸುವುದಿಲ್ಲ, ಜೀವನವನ್ನು ನೆಮ್ಮದಿಯಿಂದ ಕಳೆಯಬಹುದು.
ಅತಿಯಾದ ಒತ್ತಡದ ಜೀವನವೂ ಒಳ್ಳೆಯದಲ್ಲ, ಅತಿ ಸಲುಗೆಯ ಜೀವನವೂ ಒಳ್ಳೆಯದಲ್ಲ. ಜೀವನದಲ್ಲಿ ಕಷ್ಟ ಸುಖ, ಏಳು ಬೀಳು ಇದ್ದಾಗಲೆ ಅದು ಉತ್ತಮ ಜೀವನ ಎನಿಸಿಕೊಳ್ಳುತ್ತದೆ.
ನಾವು ಸಹ ಉತ್ತಮ ಜೀವನ ನಡೆಸುವ ಪ್ರಯತ್ನ ಮಾಡೋಣ. ಹಣದ ಅವಶ್ಯಕತೆಯನ್ನರಿತು ಬಾಳೋಣ. ಸ್ನೇಹ ಸಂಬಂಧಗಳಿಗೆ ಬೆಲೆಕೊಡೋಣ.ಆಗಲೇ ಸುಂದರ ಜಗತ್ತನ್ನು ನಮ್ಮ ಮುಂದೆ ಕಾಣಬಹುದಾಗಿದೆ.
ಸರ್ಪ...✍🏻

Comments
Post a Comment