ಜೀವನವೊಂದು ಸುಂದರ ಬಲೂನು
ಜೀವನದ ಬಂಡಿಯನು ಹಾಯಾಗಿ ಸಾಗಿಸುವುದೆಂದರೆ ಅಷ್ಟೊಂದು ಸುಲಭವಲ್ಲ. ಅದೊಂಥರ ಗಾಳಿ ತುಂಬಿದ ಬಲೂನಿನಂತೆ ನಾಜೂಕಿನದು. ಅದನ್ನು ನಾವೆಷ್ಟು ಕಾಳಜಿಯಿಂದ ಹಿಡಿದಿಟ್ಟುಕೊಳ್ಳುತ್ತೇವೆಯೋ ಅಷ್ಟು ಬಾಳಿಕೆ ಬರುತ್ತದೆ. ಜೀವನವೂ ಹಾಗೆಯೇ ನಮ್ಮ ಬಗ್ಗೆ ಆಡಿಕೊಳ್ಳುವ ಜನರು ಬಲೂನಿಗೆ ಚುಚ್ಚುವ ಮುಳ್ಳಿದ್ದಂತೆ , ಮುಳ್ಳಿನಿಂದ ದೂರವಿದ್ದಷ್ಟೂ ಬಲೂನು ಹೆಚ್ಚುದಿನ ಬಾಳಿಕೆ ಬರುತ್ತದೆ. ಹಾಗೆಯೇ ನಾವೂ ಸಹ ಬೇರೆಯವರ ಮಾತಿಗೆ ತಲೆಕೆಡಿ ಸಿಕೊಳ್ಳದೇ ನಮ್ಮ ಕೆಲಸದ ಬಗ್ಗೆ ಗಮನಕೊಟ್ಟರೆ ಜೀವನವು ಆಹ್ಲಾದಕರವಾಗಿರುತ್ತದೆ.ಹೀಗೆ ಬಲೂನು ಗಾಳಿ ತುಂಬಿರುವಷ್ಟು ದಿನ ಚೆಂದ ಕಾಣಿಸುತ್ತದೆ, ನಮ್ಮ ಜೀವನವೂ ಇಷ್ಟೇ ಬಲೂನಿನಂತೆ ಸುಂದರವಾಗಿರಬೇಕೆಂದರೆ ಅತ್ಯಂತ ಕಾಳಜಿಯಿಂದಿರಬೇಕು.

Comments
Post a Comment