💞😘😍ಕಾಯುವುದರಲಿ ಅರ್ಥವೇನಿಲ್ಲ😍😘💞
ಕಾಯುವುದರಲಿ ಅರ್ಥವೇನಿಲ್ಲ
ಏನೆಂದು ಹೇಳಲಿ ಗೆಳೆಯ
ನಿನ್ನ ಒಂದೇ ಒಂದು ಸ್ಪರ್ಶಕೆ
ಮಾತುಗಳೇ ನಿಂತುಹೋಗಿವೆ
ನಿನ್ನ ಆ ಕಂಗಳ ಹೊಳಪು
ನನ್ನ ನಯನಗಳಲಿ ಪ್ರತಿಫಲಿಸುತಿದೆ
ಎದೆ ಬಿಗಿದಂತಾಗಿ ಭಾರವಾಗಿದೆ
ನಿನ್ನೊಂದಿಗಿರುವ ಕ್ಷಣವೇ
ಸ್ವರ್ಗವಾಗಿ ಗೋಚರಿಸುತಿಹುದು
ನನ್ನಧರಗಳೂ ಕೂಡಾ ಕಾದಿವೆ
ನಿನ್ನ ಮಧುತುಂಬಿದ ಮುತ್ತಿಗೆ
ಕಾಯುವುದರಲಿ ಅರ್ಥವೇನಿಲ್ಲ ಗೆಳೆಯ
ಎಲ್ಲಾ ಸಂಕೋಲೆಗಳನು ಕಳಚಿ
ಜಗವನೇ ಮರೆತು ಒಂದಾಗಿಬಿಡುವ.
ಸರ್ಪ...✍🏻
Lovely
ReplyDeleteTq
Delete