ಮೈ ಸೋಕುತ್ತಿದ್ದರೆ...!
ಮೈ ಸೋಕುತ್ತಿದ್ದರೆ..!
ಕಾರ್ತೀಕ ಮಾಸದ ಚಳಿಯು
ನನ್ನ ಮೈಸೋಕುತ್ತಿದ್ದರೆ
ನಿನ್ನ ಮಧುರಾತಿಮಧುರ
ಅಧರಗಳಿಂದ ಚುಂಬಿಸಿದಂತಾಗುತ್ತಿದೆ ಗೆಳತಿ,
ಈ ಚಳಿಗೆ ಮನದ ಭಾವನೆಗಳೆಲ್ಲಾ
ಮಂಜುಗಡ್ಡೆಯಂತೆ ಹೆಪ್ಪುಗಟ್ಟಿವೆ
ಮೃದುವಾಗಿ ಒಮ್ಮೆ ಅಪ್ಪಿಬಿಡು,
ಎಳೆಬಿಸಿಲಿಗೆ ಕರಗುವ ಮಂಜಿನಂತೆ
ನನ್ನ ಭಾವನೆಗಳೆಲ್ಲಾ ಕರಗಿ
ಶೃಂಗಾರ ರಸವಾಗಿ ಹರಿಯಲಿ.
ಸರ್ಪ...✍🏻
Nice 😍
ReplyDeleteThank you
Delete