ರೂವಾರಿ
ರೂವಾರಿ
ಎದೆಯ ಪಾತಾಳದಲಿ
ಪ್ರೀತಿ ಚಿಲುಮೆಯು ಜಿನುಗಿ
ಹೊಳೆಯಾಗಿ ಹರಿಯಲು
ಹಂಬಲಿಸುತಿದೆ ಈ ಜೀವ
ಮಾಯಾಜಗದ ಕತ್ತಲೆಯೊಳು
ಹೃದಯ ಕಳೆದಿದೆ ನನ್ನದು
ಪ್ರೇಮದೊನಲು ಚಿಗುರಿದೆ
ಮನದ ಮರುಭೂಮಿಯಲಿ
ಸೇರ ಬಯಸಿದೆ ನಿನ್ನುಸಿರ
ತವಕದಲಿ ಕಾದಿದೆ ಈ ಜೀವ
ಹೊನ್ನ ಕಿರಣಗಳೆಲ್ಲ ನಿಶ್ಯಬ್ಧವಾಗಿವೆ
ಸೋತಾಗಿದೆ ನಿನ್ನ ಕಂಗಳ ಕಾಂತಿಯ ಸೆಳೆತಕೆ
ಬಣ್ಣದೋಕುಳಿಯಲಿ ಮಿಂದೆದ್ದಿದೆ ಹೃದಯ
ತೇಲಾಡಿದೆ ಆಗಸದಲಿ ಗುರುತ್ವ ಮೀರಿ
ಬಾನಂಗಳದ ಶಶಿಯು ನಾಚಿ
ನಿನ್ನಂದಕೆ ಮರುಳಾಗಿಹನು
ಮರೆಮಾಚದಿರು ಭಾವನೆಗಳ
ನಾನಾಗುವೆ ಅವುಗಳ ರೂವಾರಿ
ತೇಲುತ ನಲಿಯೋಣ ನಶೆಯಲಿ
ಮಾಡುತ ಜಗದಗಲ ಪ್ರೇಮಸವಾರಿ.
ಸರ್ಪ...✍️
Comments
Post a Comment