Black fungus

 *ಬ್ಲಾಕ್ ಫಂಗಸ್ (ಕಪ್ಪು ಶಿಲೀಂಧ್ರ)* 


ಶಿಲೀಂಧ್ರಗಳು ಮಾನವನಿಗೆ ಉಪಯೋಗಕಾರಿಯಾಗಿದ್ದವು ,ಹಲವಾರು ಔಷಧಿಗಳ ತಯಾರಿಕೆಯಲ್ಲಿ ಬಳಸಿಕೊಂಡು ಔಷಧಿಗಳನ್ನು ತಯಾರಿಸಿ ರೋಗಗಳನ್ನು ತಡೆಯಲು ಸಹಕಾರಿಯಾಗಿವೆ. ಆದರೆ ಪ್ರಸ್ತುತ ಕಪ್ಪು ಶಿಲೀಂಧ್ರ ಎಂಬುದು ಮನುಷ್ಯನ ಜೀವಕ್ಕೆ ಕುತ್ತು ತಂದೊಡ್ಡಿದೆ. ಇದೊಂದು ಮಾರಣಾಂತಿಕ ಶಿಲೀಂಧ್ರವಾಗಿದ್ದು ಸ್ವಚ್ಛತೆಯ ಕೊರತೆಯಿಂದ ಬರಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಕೊರೋನಾ ವೈರಸ್ ನೊಂದಿಗೆ ಕಾಣಿಸಿಕೊಂಡಿರುವುದು ಎಲ್ಲರಲ್ಲೂ ಭಯದ ವಾತಾವರವನ್ನು ಮೂಡಿಸಿದೆ. ಕಪ್ಪು ಶಿಲೀಂಧ್ರವು ದೇಹದ ಕಣ್ಣು, ಮೂಗು ಇನ್ನಿತರೇ ಭಾಗಗಳಲ್ಲಿ ಕಂಡುಬರುವಂತದ್ದಾಗಿದೆ. ಇದರಿಂದ ಸೋಂಕಿಗೆ ಒಳಗಾದವರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ..ಇತ್ತಿಚೆಗೆ ಇದರಿಂದ ಸಾವು ಉಂಟಾಗಿರುವ ಪ್ರಕರಣಗಳೂ ಬೆಳಕಿಗೆ ಬರುತ್ತಿವೆ. 


ಆದಷ್ಟು ನಾವುಗಳು ಕೊರೋನಾ ಸೋಂಕಿನ ವಿರುದ್ಧ ರಕ್ಷಣೆ ಪಡೆಯುವುದರ ಜೊತೆಗೆ ಈ ಕಪ್ಪು ಶಿಲೀಂಧ್ರದ ವಿರುದ್ಧವೂ ಹೋರಾಡುವ ಅಗತ್ಯತೆ ಬಂದೊದಗಿದೆ. ಇತ್ತೀಚೆಗೆ ವಾರ್ತಾಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವಂತೆ ಕಪ್ಪು ಶಿಲೀಂಧ್ರವು ಬರಲು ಕಾರಣ ನಾವುಗಳು ನಿರಂತರವಾಗಿ ಬಳಸುತ್ತಿರುವ ಮಾಸ್ಕ್ ನ್ನು ಸ್ವಚ್ಛಗೊಳಿಸದೇ ಇರುವುದು ಹಾಗೂ ಹಾಕಿದ ಮಾಸ್ಕನ್ನೆ ಎರಡು ,ಮೂರು ವಾರಗಳ ಕಾಲ ಬದಲಾಯಿಸದೇ ಇರುವುದು ಎಂಬುದಾಗಿ ತಿಳಿದುಬಂದಿದೆ.


ಕಪ್ಪು ಶಿಲೀಂಧ್ರವು ಸ್ವಚ್ಛತೆಯಿಲ್ಲದಿದ್ದರೆ ಬರುತ್ತದೆ ಎಂಬುದು ಇದರ ಮೂಲಕ ತಿಳಿಯುತ್ತಿದೆ. ಆದ ಕಾರಣ ತಾವುಗಳು ಆದಷ್ಟು ನಮ್ಮ ದೇಹ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕಾಗಿದೆ. ಇದಲ್ಲದೇ ಪದೆ ಪದೆ ನಮ್ಮ ದೇಹದಲ್ಲಿನ ಸೂಕ್ಷ್ಮ ಭಾಗಗಳಾದ ಕಣ್ಣು, ಕಿವಿ, ಮೂಗು , ಬಾಯಿಗಳನ್ನು  ಸುಚಿಗೊಳಿಸಿಕೊಳ್ಳುವುದು ಅಡತ್ಯವಾಗಿದೆ. 


ಪೌಷ್ಠಿಕ ಹಾಗೂ ಗುಣಮಟ್ಟದ ಆಹಾರವನ್ನು ಸೇವಿಸುವುದು ಅಗತ್ಯವಾಗಿದೆ. ಆದಷ್ಟು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಬದುಕುವುದು ಅನಿವಾರ್ಯವಾಗಿದೆ. ಕಪ್ಪು ಶಿಲೀಂಧ್ರದ ಬಗ್ಗೆ ಹೆಚ್ಚಿನದಾಗಿ ಯಾವ ಮಾಹಿತಿಗಳೂ ಲಭ್ಯವಿಲ್ಲದ ಕಾರಣ ನಾವುಗಳು ಆದಷ್ಟು ಈ ಭಯಾನಕ ರೋಗದಿಂದ ಎಚ್ಚರದಿಂದ ಇರುವುದು ಅವಶ್ಯಕವಾಗಿದೆ. 


ಕೊರೋನಾದ ಜೊತೆಜೊತೆಗೆ ಕಪ್ಪು ಶಿಲೀಂಧ್ರ ಹಾಗೂ ಬಿಳಿ ಶಿಲೀಂಧ್ರದ ವಿರುದ್ಧ ಹೋರಾಡುವುದು ನಮ್ಮ ಮುಂದಿನ ಜೀವನವಾಗಿದೆ. ಆದಷ್ಟು ರೋಗ ಬರದಂತೆ ತಡೆಯುವುದೊಂದೇ ಇದಕ್ಕೆ ಪರಿಹಾರ ..ಹಾಗಾಗಿ ಲಾಕ್ ಡೌನ್ ಸಮಯದಲ್ಲಿ ಅನವಶ್ಯಕ ಹೊರಗಡೆ ತಿರುಗುವುದನ್ನು ನಿಲ್ಲಿಸಿ , ಸ್ಯಾನಿಟೈಜರ್ ನ್ನು ಬಳಸಿ , ಬಿಸಿ ನೀರಿನಿಂದ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳಿ. 


ರೋಗ ಬಂದಾಗ ಪರದಾಡುವುದಕ್ಕಿಂತ ರೋಗ ಬರದಂತೆ ಎಚ್ಚರವಹಿಸುವುದರಿಂದ ನಾವುಗಳು ಸುರಕ್ಷಿತವಾಗಿರಬಹುದಾಗಿದೆ. 


*ಸರ್ಪಭೂಷಣ.....✍🏻*

*ಪೊಲೀಸ್ ಇಲಾಖೆ*

Comments

Post a Comment

Popular posts from this blog

😍👆✍️ಮಗ್ಲೂರಾ ಜಾತ್ರ್ಯಾಗ...ಗೊಂಬೆ ತಂದೀನಿ ಬಾರಾ✍️👆😍

ಒಲವಿಂದಲಿ.......

🥰😍ಕೊಟ್ಟೂರಿನ ಮನಸುಗಳು😍🥰