Posts

Showing posts from November, 2022

🌹♥️ಮಲ್ಲಿಗೆಯ ನೀ ಮುಡಿದು♥️🌹

Image
ಮಲ್ಲಿಗೆಯ ನೀ ಮುಡಿದು ಕಾನನದ ನಡುವೆಲ್ಲೋ ಸುಮವು ಅರಳಿ ಸೌಗಂಧವ ತಾ ಸೂಸಿರೆ..:: ಕೆರೆಯ ದಡದಲ್ಲೆಲ್ಲೋ ಕೆಸರನೂ ಲೆಕ್ಕಿಸದೆ ತಲೆಯೆತ್ತಿದೆ ತಾವರೆ..:: ಜಾತ್ರೆಯ ಮಧ್ಯದಲ್ಲೆಲ್ಲೋ ಎಲ್ಲರ ಗಮನ ಸೆಳೆದು ನಿಂತಿರುವೆ ಮಲ್ಲಿಗೆಯ ನೀ ಮುಡಿದು..:: ನನ್ನ ಹೃದಯದೊಳಗೆಲ್ಲೋ ಪ್ರೇಮಾಂಕುರ ಉದಯಿಸಿದೆ ಜೋರಾಗಿ ತಾ ಬಡಿದು..:: ಬರಬಾರದೆ ಗೆಳತಿ ನೀ ಸನಿಹಕೆ ಇನ್ನಾದರೂ ವಿರಹದ ಬೇಲಿಯ ಕಿತ್ತೊಗೆದು..:: ಸಮ್ಮತಿಯೊಂದ ನೀಡಬಾರದೆ ಕಣ್ಣ ಸನ್ನೆಯೊಂದರಲಿ ಗಾಳಿಯಲ್ಲೇ ಸಣ್ಣ ಮುತ್ತೊಗೆದು..:: ಸರ್ಪ...✍🏻

👉💴💰ಅತಿಯಾಸೆ ಗತಿಗೆಡಿಸಿತು, ಹೆಂಡತಿಯ ಹಣದಾಸೆ ಗಂಡನ ಬಲಿತೆಗೆದುಕೊಂಡಿತು🙁🙁

Image
ಅತಿಯಾಸೆ ಗತಿಗೆಡಿಸಿತು  ಎನ್ನುವ ಗಾದೆ ನಮ್ಮ ಹಿರಿಯರ ಕಾಲದಿಂದಲೂ ಬಂದಂತಹದ್ದು. ಇದು ಪ್ರಸ್ತುತ ದಿನಕ್ಕೆ ನೂರಕ್ಕೆ ನೂರರಷ್ಟು ಸತ್ಯವಾದ ಉದಾಹರಣೆಯೊಂದನ್ನು ನಮ್ಮ ಕಣ್ಮುಂದೆ ಇಟ್ಟಿದೆ. ಅದೇನಪ್ಪ ಅಂತಹ ಉದಾಹರಣೆಯೆಂದರೆ ಇತ್ತೀಚೆಗೆ ಬಂದ ಒಂದು ಸುದ್ಧಿ  "  ಮಂಡ್ಯ ಜಿಲ್ಲೆಯಲ್ಲಿ ಹೆಂಡತಿಯ ಹಣದ ಹುಚ್ಚು ತನ್ನ ಗಂಡನನ್ನೇ ಬಲಿತೆಗೆದುಕೊಂಡಿರುವ ಘಟನೆ"  ...ಈ ರೀತಿಯ ಹಲವಾರು ಘಟನೆಗಳು ನಡೆದಿವೆಯಾದರೂ ಕಣ್ಣಿಗೆ ಕಂಡಿಲ್ಲ. ಒಬ್ಬ ಹೆಣ್ಣು ತನ್ನ ಸಂಸಾರವನ್ನು ಒಳ್ಳೆಯ ರೀತಿಯಲ್ಲಿ ಸಾಗಿಸುವಲ್ಲಿ ಮಾದರಿಯಾಗಿ ನಿಲ್ಲುವ ಈ ಕಾಲದಲ್ಲಿ ತನ್ನ ಪತಿಗೆ ದಿನಾಲು ಹಣದ ಬೇಡಿಕೆಯಿಟ್ಟು , ಆತನ ಮನಸ್ಥಿತಿಯನ್ನು ಅರಿಯದೇ ವರ್ತಿಸಿದ್ದರಿಂದ ಇಂದು ಆಕೆಯ ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರಿಂದ ಆಕೆಗಾದ ಲಾಭವಾದರೂ ಏನು ತಿಳಿಯದು. ಹೀಗೆ ನಾವು ಅತಿಯಾದ ಆಸೆಗಳ ಹಿಂದೆ ಓಡಿದಾಗ ನಮ್ಮ ಜೀವನದ ಸುಖ ಸಮಯವನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ. ಯಾವುದೇ ವಸ್ತುವನ್ನು ಆಸೆ ಪಡಬೇಕು ನಿಜ ,ಆದರೆ ಅತಿಯಾಸೆ ಪಟ್ಟರೆ ಇಂತಹ ಘಟನೆಗಳು ಜರುಗುವವು. ಹಾಗೆ ಏನನ್ನಾದರೂ ಪಡೆಯಬೇಕೆಂದರೆ ಅದಕ್ಕೊಂದಿಷ್ಟು ರೀತಿ ನೀತಿ, ಇತಿ ಮಿತಿ ಎನ್ನುವ ಪದಗಳನ್ನು ಅಳವಡಿಸಿಕೊಂಡಲ್ಲಿ ನಮ್ಮ ಸಂಸಾರ, ಜೀವನ ಸಂತಸದಿಂದ ಕೂಡಿರುತ್ತದೆ ಮತ್ತು ಆತ್ಮಹತ್ಯೆ, ಕೊಲೆ, ಜಗಳ, ಮನಸ್ತಾಪ ಇಂತಹ ಕೆಟ್ಟ ಘಟನೆಗಳೂ ಸಹ ಉದ್ಭವಿಸುವುದಿಲ್ಲ, ಜೀವನವನ್ನು ನೆಮ್ಮದಿಯಿಂದ ಕಳೆಯಬಹ...

ಜೀವನವೊಂದು ಸುಂದರ ಬಲೂನು

Image
ಜೀವನದ ಬಂಡಿಯನು ಹಾಯಾಗಿ ಸಾಗಿಸುವುದೆಂದರೆ ಅಷ್ಟೊಂದು ಸುಲಭವಲ್ಲ. ಅದೊಂಥರ ಗಾಳಿ ತುಂಬಿದ ಬಲೂನಿನಂತೆ ನಾಜೂಕಿನದು. ಅದನ್ನು ನಾವೆಷ್ಟು ಕಾಳಜಿಯಿಂದ  ಹಿಡಿದಿಟ್ಟುಕೊಳ್ಳುತ್ತೇವೆಯೋ ಅಷ್ಟು ಬಾಳಿಕೆ ಬರುತ್ತದೆ. ಜೀವನವೂ ಹಾಗೆಯೇ ನಮ್ಮ ಬಗ್ಗೆ ಆಡಿಕೊಳ್ಳುವ ಜನರು ಬಲೂನಿಗೆ ಚುಚ್ಚುವ ಮುಳ್ಳಿದ್ದಂತೆ , ಮುಳ್ಳಿನಿಂದ ದೂರವಿದ್ದಷ್ಟೂ ಬಲೂನು ಹೆಚ್ಚುದಿನ ಬಾಳಿಕೆ ಬರುತ್ತದೆ. ಹಾಗೆಯೇ ನಾವೂ ಸಹ ಬೇರೆಯವರ ಮಾತಿಗೆ ತಲೆಕೆಡಿ ಸಿಕೊಳ್ಳದೇ ನಮ್ಮ ಕೆಲಸದ ಬಗ್ಗೆ ಗಮನಕೊಟ್ಟರೆ ಜೀವನವು ಆಹ್ಲಾದಕರವಾಗಿರುತ್ತದೆ.ಹೀಗೆ ಬಲೂನು ಗಾಳಿ ತುಂಬಿರುವಷ್ಟು ದಿನ ಚೆಂದ ಕಾಣಿಸುತ್ತದೆ, ನಮ್ಮ ಜೀವನವೂ ಇಷ್ಟೇ ಬಲೂನಿನಂತೆ ಸುಂದರವಾಗಿರಬೇಕೆಂದರೆ ಅತ್ಯಂತ ಕಾಳಜಿಯಿಂದಿರಬೇಕು.