*ಬೀದಿಕಸವಾಗಿವೆ..!* ಸಾವಿರ ಪದಗಳೊಂದಿಗೆ ಗುದ್ದಾಡಿ ಗುದ್ದಾಡಿ ಬರೆದ ಕವಿತೆಯಿಂದು ಕಳೆಗುಂದಿದೆ ಓದುಗನೆದೆಯ ಸೀಳಿ ಹೊಕ್ಕ ಪದಗಳು ಹೆಕ್ಕಲಾರದೆ ಬಿದ್ದ ಬೀದಿಕಸವಾಗಿವೆ ಎದ್ದೆವೋ ಬಿದ್ದೆವೋ ಎಂದು ಕೊಂಡುತೆಗೆದ ನೂರು ಪುಸ್ತಕಗಳು ಶಿರಕಿಳಿಯದೆ ಶವವಾಗಿವೆ ತಿಳಿದು ಬದುಕಬೇಕಿರುವ ಮಾನವ ಧರ್ಮವಿಂದು ಆಚರಣೆಗಳೊಂದಿಗೆ ಆಡಂಬರಕೆ ಕೈಜೋಡಿಸಿದೆ ಬರೆದ ಅಕ್ಷರಕ್ಕೇನು ಓದಿಸಿಕೊಳ್ಳುವ ತಾಕತ್ತು ಮಾತ್ರ ಬಳಕೆಗೆ ಬರುವುದು ನಯಾ ಪೈಸಕ್ಕೂ ಕಿಮ್ಮತ್ತಿಲ್ಲದಷ್ಟು ಸಾವಿರ ಪದಗಳೊಂದಿಗೆ ಗುದ್ದಾಡಿ ಗುದ್ದಾಡಿ ಬರೆದ ಕವಿತೆಯಿಂದು ಕಳೆಗುಂದಿದೆ