Posts

Showing posts from May, 2021

Black fungus

 *ಬ್ಲಾಕ್ ಫಂಗಸ್ (ಕಪ್ಪು ಶಿಲೀಂಧ್ರ)*  ಶಿಲೀಂಧ್ರಗಳು ಮಾನವನಿಗೆ ಉಪಯೋಗಕಾರಿಯಾಗಿದ್ದವು ,ಹಲವಾರು ಔಷಧಿಗಳ ತಯಾರಿಕೆಯಲ್ಲಿ ಬಳಸಿಕೊಂಡು ಔಷಧಿಗಳನ್ನು ತಯಾರಿಸಿ ರೋಗಗಳನ್ನು ತಡೆಯಲು ಸಹಕಾರಿಯಾಗಿವೆ. ಆದರೆ ಪ್ರಸ್ತುತ ಕಪ್ಪು ಶಿಲೀಂಧ್ರ ಎಂಬುದು ಮನುಷ್ಯನ ಜೀವಕ್ಕೆ ಕುತ್ತು ತಂದೊಡ್ಡಿದೆ. ಇದೊಂದು ಮಾರಣಾಂತಿಕ ಶಿಲೀಂಧ್ರವಾಗಿದ್ದು ಸ್ವಚ್ಛತೆಯ ಕೊರತೆಯಿಂದ ಬರಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಕೊರೋನಾ ವೈರಸ್ ನೊಂದಿಗೆ ಕಾಣಿಸಿಕೊಂಡಿರುವುದು ಎಲ್ಲರಲ್ಲೂ ಭಯದ ವಾತಾವರವನ್ನು ಮೂಡಿಸಿದೆ. ಕಪ್ಪು ಶಿಲೀಂಧ್ರವು ದೇಹದ ಕಣ್ಣು, ಮೂಗು ಇನ್ನಿತರೇ ಭಾಗಗಳಲ್ಲಿ ಕಂಡುಬರುವಂತದ್ದಾಗಿದೆ. ಇದರಿಂದ ಸೋಂಕಿಗೆ ಒಳಗಾದವರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ..ಇತ್ತಿಚೆಗೆ ಇದರಿಂದ ಸಾವು ಉಂಟಾಗಿರುವ ಪ್ರಕರಣಗಳೂ ಬೆಳಕಿಗೆ ಬರುತ್ತಿವೆ.  ಆದಷ್ಟು ನಾವುಗಳು ಕೊರೋನಾ ಸೋಂಕಿನ ವಿರುದ್ಧ ರಕ್ಷಣೆ ಪಡೆಯುವುದರ ಜೊತೆಗೆ ಈ ಕಪ್ಪು ಶಿಲೀಂಧ್ರದ ವಿರುದ್ಧವೂ ಹೋರಾಡುವ ಅಗತ್ಯತೆ ಬಂದೊದಗಿದೆ. ಇತ್ತೀಚೆಗೆ ವಾರ್ತಾಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವಂತೆ ಕಪ್ಪು ಶಿಲೀಂಧ್ರವು ಬರಲು ಕಾರಣ ನಾವುಗಳು ನಿರಂತರವಾಗಿ ಬಳಸುತ್ತಿರುವ ಮಾಸ್ಕ್ ನ್ನು ಸ್ವಚ್ಛಗೊಳಿಸದೇ ಇರುವುದು ಹಾಗೂ ಹಾಕಿದ ಮಾಸ್ಕನ್ನೆ ಎರಡು ,ಮೂರು ವಾರಗಳ ಕಾಲ ಬದಲಾಯಿಸದೇ ಇರುವುದು ಎಂಬುದಾಗಿ ತಿಳಿದುಬಂದಿದೆ. ಕಪ್ಪು ಶಿಲೀಂಧ್ರವು ಸ್ವಚ್ಛತೆಯಿಲ್ಲದಿದ್ದರೆ ಬರುತ್ತದೆ ಎಂಬುದು ಇದರ ಮ...

ರೂವಾರಿ

  ರೂವಾರಿ ಎದೆಯ ಪಾತಾಳದಲಿ ಪ್ರೀತಿ ಚಿಲುಮೆಯು ಜಿನುಗಿ ಹೊಳೆಯಾಗಿ ಹರಿಯಲು  ಹಂಬಲಿಸುತಿದೆ ಈ ಜೀವ ಮಾಯಾಜಗದ ಕತ್ತಲೆಯೊಳು ಹೃದಯ ಕಳೆದಿದೆ ನನ್ನದು ಪ್ರೇಮದೊನಲು ಚಿಗುರಿದೆ ಮನದ ಮರುಭೂಮಿಯಲಿ ಸೇರ ಬಯಸಿದೆ ನಿನ್ನುಸಿರ ತವಕದಲಿ ಕಾದಿದೆ ಈ ಜೀವ ಹೊನ್ನ ಕಿರಣಗಳೆಲ್ಲ ನಿಶ್ಯಬ್ಧವಾಗಿವೆ ಸೋತಾಗಿದೆ ನಿನ್ನ ಕಂಗಳ  ಕಾಂತಿಯ ಸೆಳೆತಕೆ ಬಣ್ಣದೋಕುಳಿಯಲಿ ಮಿಂದೆದ್ದಿದೆ ಹೃದಯ ತೇಲಾಡಿದೆ ಆಗಸದಲಿ ಗುರುತ್ವ ಮೀರಿ ಬಾನಂಗಳದ ಶಶಿಯು ನಾಚಿ ನಿನ್ನಂದಕೆ ಮರುಳಾಗಿಹನು ಮರೆಮಾಚದಿರು ಭಾವನೆಗಳ ನಾನಾಗುವೆ ಅವುಗಳ ರೂವಾರಿ ತೇಲುತ ನಲಿಯೋಣ ನಶೆಯಲಿ ಮಾಡುತ ಜಗದಗಲ ಪ್ರೇಮಸವಾರಿ. ಸರ್ಪ...✍️